Concentration is the secret of success
*ಓರ್ವ ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಬಂದಳು..* *ದರ್ಶನ ಚೆನ್ನಾಗಿ ಆಯಿತಾ ಮಗಳೇ, ಎಂದು ತಂದೆ ಪ್ರಶ್ನಿಸಿದರು….* *ಮಗಳು:* ಇನ್ನು ಮುಂದೆ ನನ್ನನ್ನು ದೇವಸ್ಥಾನಕ್ಕೆ ಹೋಗು ಎಂದು ಹೇಳಬೇಡಿ.. ಕೋಪದಿಂದ ನುಡಿದಳು… *ತಂದೆ:* ಏನು ನಡೆಯಿತು ಮಗಳೇ.. *ಮಗಳು:* ದೇವಸ್ಥಾನದಲ್ಲಿ ಒಬ್ಬರಿಗೂ ಭಕ್ತಿ ಇಲ್ಲ, ದೇವರ ಮೇಲೆ ಧ್ಯಾನ ಇಲ್ಲ. ಎಲ್ಲರೂ ಅವರ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದು, ಫೋಟೋಗಳನ್ನು ತೆಗೆಯುವುದು, ಭಕ್ತಿಗೆ ಸಂಬಂಧಿಸಿದ್ದು ಅಲ್ಲದೇ ಬೇರೆ ಸಂಗತಿಗಳನ್ನು ಚರ್ಚಿಸುವುದನ್ನು ಮಾಡುತ್ತಿದ್ದಾರೆ. ಕನಿಷ್ಠ ಭಜನೆ ನಡೆಯುವ ಬಳಿ ಸಹ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಯಾರಲ್ಲೂ ನನಗೆ ಭಕ್ತಿ ಕಾಣಿಸಲಿಲ್ಲ. *ತಂದೆ:* (ಸ್ವಲ್ಪ ಹೊತ್ತು ಮೌನವಾಗಿದ್ದು) ಸರಿ.. ನೀನು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನನ್ನದೊಂದು ಸಣ್ಣ ಕೋರಿಕೆ… ನೆರವೇರಿಸುತ್ತೀಯಾ..? *ಮಗಳು:* ಖಂಡಿತಾ ಅಪ್ಪಾ… ನಿಮ್ಮ ಮಾತನ್ನು ನಾನು ಯಾವಾಗಲೂ ಇಲ್ಲ ಎಂದಿಲ್ಲ. ಹೇಳಿ ಏನು ಮಾಡಬೇಕು… *ತಂದೆ:* ಒಂದು ಗಾಜಿನ ಗ್ಲಾಸಿನ ತುಂಬ ನೀರು ತೆಗೆದುಕೊಂಡು ಹೋಗು ದೇವಸ್ಥಾನಕ್ಕೆ.. ಮೂರೇ ಮೂರು ಪ್ರದಕ್ಷಿಣೆ ಮಾಡಿ ಬರಬೇಕು.. ಆದರೆ ಒಂದು ಸೂಚನೆ…ನಿನ್ನ ಲೋಟನಿಂದ ಒಂದೇ ಒಂದು ಹನಿ ನೀರು ಚೆಲ್ಲಬಾರದು. ಈ ಕೆಲಸ ಮಾಡುತ್ತೀಯಾ……...